== ಪೀಠಿಕೆ == ಅಧಿಕೃತವಾಗಿ ( ()31 ರ ಒಲಿಂಪಿಯಾಡ್ ಆಟೋಟಗಳು ಮತ್ತು ರಿಯೊ 2016 ಎಂದು ಕರೆಯುವರು. ಈ ಒಲಿಂಪಿಕ್ ಆಟೋಟ ಸ್ಪರ್ಧೆಗಳು ಪ್ರಮುಖ ಅಂತಾರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ. 2016 ಆಗಸ್ಟ್ 5 ರಿಂದ 21 ಆಗಸ್ಟ್ ವರೆಗೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಿತು. ದಾಖಲೆ ಸಂಖ್ಯೆಯ ದೇಶಗಳ ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ಪಾಲ್ಗೊಂಡರು. 206 ರಾಷ್ಟ್ರಗಳ ಒಲಿಂಪಿಕ್ ಕಮಿಟಿಗಳಿಂದ 10500 ಸ್ಪರ್ಧಿಗಳು ಭಾಗವಹಿಸಿದರು. ಕೊಸೊವೊ ಮತ್ತು ದಕ್ಷಿಣ ಸುಡಾನ್ ಮೊದಲ ಬಾರಿಗೆ ಪಾಲ್ಗೊಂಡರು. ಇದರಲ್ಲಿ 306 ಪದಕಗಳನ್ನು ಪ್ರದಾನ ಮಾಡಲಾಯಿತು. 28 ಒಲಿಂಪಿಕ್ ಆಟಗಳು; ರಗ್ಬಿ ಸೆವೆನ್ಸ್ ಮತ್ತು ಗಾಲ್ಫ್ ಸೇರಿದಂತೆ ಇವುಗಳನ್ನು ಹೊಸದಾಗಿ 2009 ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸೇರಿಸಿತು. (ಇಲ್ಲಿ ಒಲಿಂಪಿಕ್ ಕ್ರೀಡಾ ಪರಿಸರೀಯ ಸವಾಲು ಹೊಂದಿರುತ್ತದೆ) ಈ ಕ್ರೀಡಾಕೂಟವು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ(ಬ್ರೆಜಿಲ್‍ನ ದೊಡ್ಡ ನಗರ) ನಗರದ ಐದು ಸ್ಥಳಗಳಲ್ಲಿ ನಡೆಯುತ್ತದೆ. ಬೆಲೊ ಹಾರಿಜಾಂಟೆ, ಸಾಲ್ವಡಾರ್, ಬ್ರೆಜಿಲಾ (ಬ್ರೆಜಿಲ್ ರಾಜಧಾನಿ) ಮತ್ತು ಮನಾಸ್‍ಗಳಲ್ಲಿ ನಡೆಯಲಿದೆ. == ಉದ್ಘಾಟನೆ == ಸುಮಾರು 78,000 ಸೀಟು ಸಾಮರ್ಥ್ಯ ಹೊಂದಿರುವ ಮರಕಾನಾ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಆಗಸ್ಟ್ 5 (ಶುಕ್ರವಾರ) ರಂದು 8 (ಸ್ಥಳೀಯ ಕಾಲಮಾನ), ಭಾರತೀಯ ಕಾಲಮಾನ 4.30 (ಆಗಸ್ಟ್ 6, ಶನಿವಾರ) ಪ್ರಸಾರವಾಯಿತು ಬ್ರೆಜಿಲ್ ಕಾಲಮಾನಕ್ಕಿಂತ ಭಾರತೀಯ ಕಾಲಮಾನ() 8 ಗಂಟೆ, 30 ನಿಮಿಷ ಮುಂದಿದೆ. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಜ್ಯೋತಿಯನ್ನು ಫುಟ್ಬಾಲ್ ದಿಗ್ಗಜ ಪೀಲೆ ಅವರು ಬೆಳಗಿಸಲಿದ್ದಾರೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಆಶಯ ಗೀತೆ ಎಸ್ಪರಾಂಕಾ ಮೊಳಗಲಿದೆ. ಉದ್ಘಾಟನೆ ಚಿತ್ರ:[[೯]] ವೇಳಾಪಟ್ಟಿ:[[೧೦]] ತ್ರಿವರ್ಣ ಧ್ವಜ ಹಿಡಿದ ಅಭಿನವ ಬಿಂದ್ರಾ:[] ನೇರ ವೀಕ್ಷಣೆ-ವೀಡಿಯೋ:[] == ರಿಯೊ ಒಲಿಂಪಿಕ್ಸ್ 2016 ಮತ್ತು ಭಾರತ == 1900ರಿಂದಲೇ ಭಾರತ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಇದುವರೆಗೂ 23 ಬಾರಿ ವಿಶ್ವದ ಶ್ರೇಷ್ಠ ಕೂಟದಲ್ಲಿ ಭಾಗವಹಿಸಿದೆ. ತಮ್ಮ ಚೊಚ್ಚಲ ಒಲಿಂಪಿಕ್ಸ್‌ನ ಪುರುಷರ 200 ಮೀಟರ್ಸ್‌ ಓಟ ಮತ್ತು 200 ಮೀಟರ್ಸ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಕೋಲ್ಕತ್ತದ ನಾರ್ಮನ್‌ ಗಿಲ್ಬರ್ಟ್‌ ಪ್ರಿಚರ್ಡ್‌ ಬೆಳ್ಳಿ ಪದಕಗಳನ್ನು ಜಯಿಸಿದ್ದರು. ನಾರ್ಮನ್‌ ಪದಕಗಳನ್ನು ಗೆದ್ದ ಬಳಿಕ ಭಾರತ 22 ಸಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಪಟಿಯಾಲ, ಬೆಂಗಳೂರು, ಕೇರಳ ಸೇರಿದಂತೆ ನಾಲ್ಕೂ ವಲಯಗಳಲ್ಲಿ ಅಭ್ಯಾಸಕ್ಕೆ ಒಟ್ಟು 12 "ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರ" ಗಳಿವೆ. ಒಲಿಂಪಿಕ್ಸ್‌ನಂಥ ಕೂಟಕ್ಕೆ ವಿದೇಶಿ ಕೋಚ್‌ ಬೇಕು ಎಂದಾಗ ಭಾರತ ಸರ್ಕಾರ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತದೆ. ಭಾರತದ ಅಥ್ಲೀಟ್‌ ಗಳು ತರಬೇತಿ ಪಡೆಯಲು ಸ್ಪೇನ್‌, ಅಮೆರಿಕ, ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. 2016ರ ಒಲಿಂಪಿಕ್ಸ್‌ಗೆ ಹೆಚ್ಚು ಕ್ರೀಡಾಪಟುಗಳು ಅರ್ಹತೆ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಮ್‌ (ಟಾಪ್‌) ಯೋಜನೆ ಜಾರಿಗೆ ತಂದಿದೆ. ಕೋಚ್‌, ಕ್ರೀಡಾ ಪರಿಕರ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಸರ್ಕಾರ ನೆರವಾಗುತ್ತಿದೆ. ಕ್ರೀಡಾಪಟುಗಳ ವೈಯಕ್ತಿಕ ಖರ್ಚಿಗೆ ಮಾಸಿಕ ರೂ.1 ಲಕ್ಷ ಕೊಡಲು ಸರ್ಕಾರ ಮುಂದಾಗಿದೆ. (ಮ್ಯಾಪ್+)) == ಪದಕ ವಿವರ == ಸಿಂಧು, ದೀಪಾಗೆ ತವರ ಸ್ವಾಗತ 2016-08-23 ವೇಬ್ಯಾಕ್ ಮೆಷಿನ್ ನಲ್ಲಿ. ಸಿಂಧು, ಸಾಕ್ಷಿ, ದೀಪಾಗೆ ಖೇಲ್‌ರತ್ನ &&ವಿ.ಆರ್. ರಘುನಾಥ್, ಬಾಬರ್‌ಗೆ ಅರ್ಜುನ ಪುರಸ್ಕಾರ; ನಂದಿ, ಶರ್ಮಾಗೆ ದ್ರೋಣಾಚಾರ್ಯ 2016-08-23 ವೇಬ್ಯಾಕ್ ಮೆಷಿನ್ ನಲ್ಲಿ. ಅಂತಃಸತ್ವದ ಶಕ್ತಿಗೆ ’ಸಾಕ್ಷಿ’ ಸಿಂಧು, ದೀಪಾ, ಸಾಕ್ಷಿಗೆ ಖೇಲ್ ರತ್ನ; ಅಜಿಂಕ್ಯ ರೆಹಾನೆಗೆ ಅರ್ಜುನ ಪ್ರಶಸ್ತಿ 2016-08-23 ವೇಬ್ಯಾಕ್ ಮೆಷಿನ್ ನಲ್ಲಿ. ‘’ & ‘ ’: ’ == ಒಲಂಪಿಕ್ ೨೦೧೬ಕ್ಕೆ ಅರ್ಹತೆ ಪಡೆದ ಪಟುಗಳ ಸಂಖ್ಯೆ == == ರಿಯೋಕ್ಕೆ ಆಯ್ಕೆಪಡೆದ ಅತ್ಲೆಟಿಕ್ಸ್‍ಗಳ ಹಿನ್ನೆಲೆ == ಭಾರತದ ಅಥ್ಲೆಟಿಕ್ಸ್‌ ಪುರುಷರ 400 ಮೀಟರ್ಸ್‌ ಓಟದಲ್ಲಿ ಮಹಮ್ಮದ್‌ ಅನಾಸ್‌, ಲಾಂಗ್‌ ಜಂಪ್‌ ಸ್ಪರ್ಧಿ ಅಂಕಿತ್‌ ಶರ್ಮಾ ಮತ್ತು ಮಹಿಳೆಯರ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಶ್ರಬಾನಿ ನಂದಾ ಅವರು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.ಪೋಲೆಂಡ್‌ನಲ್ಲಿ ನಡೆಯುತ್ತಿರುವ ಪೋಲಿಶ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಅನಾಸ್‌ 45.40 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಒಲಿಂಪಿಕ್ಸ್‌ ಅರ್ಹತೆಯ ಸಾಧನೆ ಮಾಡಿದರು. 400 ಮೀಟರ್ಸ್‌ನಲ್ಲಿ ರಿಯೊಗೆ ರಹದಾರಿ ಪಡೆಯಲು 45.40 ಸೆಕೆಂಡುಗಳ ಸಮಯ ನಿಗದಿ ಮಾಡಲಾಗಿತ್ತು. ಮಹಿಳೆಯರ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಶ್ರಬಾನಿ ನಂದಾ ಅವರು ರಿಯೊಗೆ ಅರ್ಹತೆ ಗಳಿಸಿದರು. 24 ವರ್ಷದ ಒಡಿಶಾದ ಅಥ್ಲೀಟ್‌ ಶ್ರಬಾನಿ ಕಜಕಸ್ತಾನದ ಅಲ್‌ಮಟಿಯಲ್ಲಿ ನಡೆಯುತ್ತಿರುವ ಜಿ. ಕೊಸಾನೊವ್‌ ಸ್ಮಾರಕ ಅಥ್ಲೆಟಿಕ್‌ ಕೂಟದಲ್ಲಿ 23.07 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದರು. ಅಂಕಿತ್‌ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್ಸ್‌ ಪ್ರವೇಶ ತಮ್ಮದಾಗಿಸಿಕೊಂಡರು. ಈ ಕೂಟದಲ್ಲಿ ಹರಿಯಾಣದ ಅಂಕಿತ್‌ ಅವರು 8.19 ಮೀಟರ್ಸ್‌ ದೂರ ಜಿಗಿದರು. ಈ ಮೂಲಕ ಕುಮಾರವೇಲು ಪ್ರೇಮಕುಮಾರ್‌ ಅವರ ಹೆಸರನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಿದರು. ಆರ್ಚರಿ:ಟ್ರಯಲ್ಸ್‌ ವೇಳೆ 24 ವರ್ಷದ ಅತನು ಅವರು ಒಲಿಂಪಿಯನ್‌ಗಳಾದ ಜಯಂತ್‌ ತಾಲೂಕದಾರ್‌ ಮತ್ತು ಮಂಗಲ್‌ ಸಿಂಗ್‌ ಚಾಂಪಿಯ ಅವರನ್ನು ಹಿಂದಿಕ್ಕಿದರು. ವಿಶ್ವಕಪ್‌ ಸ್ಟೇಜ್‌–3ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಅತನು ಅವರು ಟ್ರಯಲ್ಸ್‌ನಲ್ಲಿ 653 ಪಾಯಿಂಟ್ಸ್‌ ಕಲೆ ಹಾಕಿದರು. ಜತೆಗೆ 1.5 ಪಾಯಿಂಟ್ಸ್‌ ಬೋನಸ್‌ ರೂಪದಲ್ಲಿ ಅವರಿಗೆ ಲಭಿಸಿತು.ಪ್ರಮುಖ ಬಿಲ್ಲುಗಾರ ಅತನು ದಾಸ್‌ ಅವರು ಮುಂಬರುವ ರಿಯೊ ಒಲಿಂಪಿಕ್ಸ್‌ನ ಪುರುಷರ ರಿಕರ್ವ್‌ ವಿಭಾಗದಲ್ಲಿ, ಭಾರತ ಆರ್ಚರಿ ಸಂಸ್ಥೆ (ಎಎಐ) ಆಯ್ಕೆ ಟ್ರಯಲ್ಸ್‌ ನಡೆಸುವ ಮೂಲಕ ಭಾನುವಾರ ಅತನು ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿದೆ. 400 ಮೀಟರ್ಸ್ ಓಟ: ನಿರ್ಮಲಾ ಶೆರಾನ್‌ ಅವರು ೧-೭-೨೦೧೬ ಶುಕ್ರವಾರ 400 ಮೀಟರ್ಸ್ ಓಟದ ವಿಭಾಗಲ್ಲಿ ರಿಯೊಗೆ ರಹದಾರಿ ಪಡೆದಿದ್ದಾರೆ.ಹರಿಯಾಣದ ಅಥ್ಲೀಟ್‌ ನಿರ್ಮಲಾ ಅವರು 51.48 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಈ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ಈ ವಿಭಾಗದಲ್ಲಿ ನೂತನ ಕೂಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ನಿರ್ಮಲಾ ಅವರು ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ರಿಯೊಗೆ ರಹದಾರಿ ಪಡೆದಿರುವ ಭಾರತದ 24ನೇ ಅಥ್ಲೀಟ್‌ ಎನಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿ ಸುವ ಅವಕಾಶ ಸಜನ್‌ ಪ್ರಕಾಶ್‌ ಮತ್ತು ಶಿವಾನಿ ಕತಾರಿಯಾ ಪಾಲಾಗಿದೆ. ಭಾರತ ಈಜು ಫೆಡರೇಷನ್‌ ಮಂಗಳವಾರ ಖಚಿತಪಡಿಸಿದೆ. 12/7/2016:ಕೊನೆಯ ಅವಕಾಶದಲ್ಲಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆ ಯುವ ಆಸೆ ಹೊತ್ತು ಬಂದಿದ್ದ ಭಾರತದ ಅಥ್ಲೀಟ್‌ಗಳ ಪೈಕಿ ಮೂವರಿಗೆ ಯಶಸ್ಸು ಲಭಿಸಿದೆ. ಜೊತೆಗೆ 4X400 ಮೀಟರ್ಸ್‌ ರಿಲೆ ಸ್ಪರ್ಧೆಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳಿಗೂ ರಿಯೊ ರಹದಾರಿ ಲಭಿಸಿದೆ. ಮುಂದಿನ ತಿಂಗಳು ಬ್ರೆಜಿಲ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ನಾಲ್ಕನೇ ಲೆಗ್‌ ಕೊನೆಯ ಅವಕಾಶ. === ಜೂಡೊ === ಭಾರತದ ಜೂಡೊ ಪಟು ಅವತಾರ್ ಸಿಂಗ್ ಅವರು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಭಾರತ ಜೂಡೊ ಫೆಡರೇಷನ್ ಶನಿವಾರ ತಿಳಿಸಿದೆ. ಅಂತರರಾಷ್ಟ್ರೀಯ ಜೂಡೊ ಫೆಡರೇಷನ್ ಬಿಡುಗಡೆ ಮಾಡಿರುವ ಅರ್ಹತಾ ಪಟ್ಟಿಯಲ್ಲಿ ಏಷ್ಯಾ ಖಂಡದ ಕೋಟಾದಲ್ಲಿ ಅವರು ಅರ್ಹತೆ ಗಿಟ್ಟಿಸಿದ್ದಾರೆ. ಗುರುದಾಸಪುರದ ಅವತಾರ್ ಸಿಂಗ್ ಅವರು 90 ಕೆಜಿ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಸದ್ಯ ಅವರು ಪಂಜಾಬ್ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋದ 2015ಫೆಬ್ರುವರಿಯಲ್ಲಿ ಶಿಲ್ಲಾಂಗ್‌ ನಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 2011ರಲ್ಲಿ ಏಷ್ಯನ್ ಜೂನಿಯರ್ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ಪಡೆದಿದ್ದರು. 2013–14 ಮತ್ತು 2014–15ರಲ್ಲಿ ಅವರು ರಾಷ್ಟ್ರೀಯ ಸೀನಿಯರ್ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಉಜ್ಬೇಕಿಸ್ತಾನದಲ್ಲಿ ಹೋದ ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯನ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಪಡೆದಿದ್ದರು. ರಂಜಿತ್ ಮಹೇಶ್ವರಿ (ಟ್ರಿಪಲ್‌ ಜಂಪ್‌), ಧರ್ಮವೀರ್ ಸಿಂಗ್‌ (200 ಮೀಟರ್ಸ್‌ ಓಟ) ಮತ್ತು ಜಿನ್ಸನ್‌ ಜಾನ್ಸನ್‌ (800 ಮೀಟರ್ಸ್ ಓಟ) ಒಲಿಂಪಿಕ್ಸ್‌ಗೆ 17.30 ಮೀಟರ್ಸ್‌ ಜಿಗಿದು ರಾಷ್ಟ್ರೀಯ ದಾಖಲೆಯೊಂದಿಗೆ ಅರ್ಹತೆ ಸಂಪಾದಿಸಿಕೊಂಡರು.(2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 17.07 ಮೀಟರ್ಸ್‌ ಜಿಗಿದು ಕಂಚು ಜಯಿಸಿದ್ದರು. 2014 ಲಖನೌದಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪಂಜಾಬ್‌ನ ಅರ್ಪಿಂದರ್ ಸಿಂಗ್ 17.17 ಮೀಟರ್ಸ್ ಜಿಗಿದಿದ್ದು ರಾಷ್ಟ್ರೀಯ ದಾಖಲೆಯಾಗಿತ್ತು.) ಪುರುಷರ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಹರಿಯಾಣದ ಧರ್ಮವೀರ್‌ ಸಿಂಗ್ 20.45 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್‌ ಅರ್ಹತೆ ಪಡೆದರು. ಅರ್ಹತೆ ಗಳಿಸಲು ಅವರು 20.50 ಸೆಕೆಂಡುಗಳ ಒಳಗೆ ಗುರಿ ಮುಟ್ಟಬೇಕಿತ್ತು. ಕೇರಳದ ಜಿನ್ಸನ್‌ ಜಾನ್ಸನ್‌ 800 ಮೀಟರ್ಸ್ ಓಟದಲ್ಲಿ ಒಂದು ನಿಮಿಷ 45.98 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 800 ಮೀಟರ್ಸ್‌ ಓಟ: ಜಿನ್ಸನ್‌ ಜಾನ್ಸನ್‌ (ಕೇರಳ; 1:45.98ಸೆ.)–1, ರಿಯೊ ಒಲಿಂಪಿಕ್‌ನ ಹಾಕಿ ತಂಡದ ನಾಯಕ ಸ್ಥಾನಕ್ಕೆ ಹಿರಿಯ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರನ್ನು ನೇಮಕ ಮಾಡಲಾಗಿದೆ. == ರಿಯೊ ಒಲಿಂಪಿಕ್ಸ್ 2016 ರಲ್ಲಿ ಭಾಗವಹಿಸುವವರ ಪಟ್ಟಿ == ಬ್ರೆಜಿಲ್ಲಿನ ರಿಯೋ ಡಿಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ 2016 ಗಾಗಿ ನೂರಕ್ಕೂ ಅಧಿಕ ಮಂದಿ ಭಾರತದ ಕ್ರೀಡಾಪಟುಗಳು ತೆರಳುತ್ತಿರುತ್ತಿದ್ದಾರೆ. ಇದು ದಾಖಲೆಯ ಸಂಖ್ಯೆಯಾಗಿದ್ದು, ಲಂಡನ್ ಒಲಿಂಪಿಕ್ಸ್‌ 2012ರಲ್ಲಿ 81 ಸ್ಪರ್ಧಾಳುಗಳು ಅರ್ಹತೆ ಪಡೆದುಕೊಂಡಿದ್ದರು. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರು ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಜುಲೈ 21ರ ಎಣಿಕೆಯಂತೆ 120 ಸ್ಪರ್ಧಿಗಳ ಪಟ್ಟಿ ತಯಾರಿಸಿ ಒಲಿಂಪಿಕ್ಸ್ ಅಸೋಸಿಯೇಷನ್ಸ್ () ಕಳಿಸುತ್ತಿದ್ದು, ಅಧಿಕಾರಗಳು ಹಾಗೂ ಸಹಾಯಕ ಸಿಬ್ಬಂದಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದೆ. ಆಗಸ್ಟ್ 5 ರಿಂದ 21 ರ ತನಕ ಈ ಜಾಗತಿಕ ಕ್ರೀಡಾಕೂಟ ನಡೆಯಲಿದೆ. ನಾಲ್ಕು ವರ್ಷಕ್ಕೊಮ್ಮೆ ಬರುವ, 2016 ರಿಯೊ ಒಲಿಂಪಿಕ್ಸ್ ಹೋಗಲಿರುವ, ಇಲ್ಲಿ ಆಟಗಳಿಗೆ ಅರ್ಹತೆ ಪಡೆದಿರುವ ಭಾರತೀಯ ಕ್ರೀಡಾಪಟುಗಳ ವಿವರ: === ಹಾಕಿ:ಪುರುಷರ ಮತ್ತು ಮಹಿಳೆಯರ ತಂಡಗಳು === ಭಾರತದ ಪುರುಷರ ಹಾಕಿ ತಂಡ ಪುರುಷರ ತಂಡ ಇಂತಿದೆ ನಾಲ್ವರು ಕನ್ನಡಿಗರು:ಚಾಂಪಿಯನ್ಸ್‌ ಟ್ರೋಫಿಯಲ್ಲಿ ಉತ್ತಮ ಆಟವಾಡಿದ್ದ ಡ್ರ್ಯಾಗ್‌ ಫ್ಲಿಕ್ ಪರಿಣತ ವಿ.ಅರ್. ರಘುನಾಥ್, ಎಸ್‌.ಕೆ. ಉತ್ತಪ್ಪ ಮತ್ತು ನಿಕ್ಕಿನ್ ತಿಮ್ಮಯ್ಯ ತಂಡದಲ್ಲಿದ್ದಾರೆ. ಹಾಫ್‌ಬ್ಯಾಕ್ ಆಟಗಾರ ಎಸ್‌.ವಿ. ಸುನಿಲ್ ತಮ್ಮ ಶರವೇಗದ ಪಾಸಿಂಗ್‌ನಿಂದ ಹಲವು ಟೂರ್ನಿಗಳಲ್ಲಿ ಗಮನ ಸೆಳೆದಿದ್ದಾರೆ. 27 ವರ್ಷದ ಸುನಿಲ್ ಅವರು ಕೊಡಗಿನ ಸೋಮವಾರಪೇಟೆಯವರು. ಅವರು ಸರ್ವಿಸಸ್, ಐಒಸಿಎಲ್ ಮತ್ತು ಹಾಕಿ ಲೀಗ್ ಟೂರ್ನಿಯಲ್ಲಿ ಪಂಜಾಬ್ ವಾರಿಯರ್ಸ್ ತಂಡಗಳನ್ನು ಪ್ರತಿನಿಧಿಸುತ್ತಾರೆ. ಸ್ಪೇನ್‌ನಲ್ಲಿ ಐದನೇ ಶ್ರೇಯಾಂಕದ ಭಾರತ ತಂಡವು 2–1 ಗೋಲುಗಳಿಂದ ಸ್ಪೇನ್ ತಂಡವನ್ನು ಹಣಿಯಿತು. ಪಿ.ಅರ್. ಶ್ರೀಜೇಸ್ ನಾಯಕತ್ವದ ತಂಡವು ಹೋದ ವಾರ ಮ್ಯಾಡ್ರಿಡ್‌ನಲ್ಲಿ ಸ್ಪೇನ್ ವಿರುದ್ಧ ಸೋಲನುಭವಿಸಿತ್ತು. ಆದರೆ ಈ ಪಂದ್ಯದಲ್ಲಿ ಸಂಘಟಿತ ಹೋರಾಟ ಮಾಡಿತು. ಆಕಾಶ್‌ದೀಪ್ ಫೀಲ್ಡ್‌ ಗೋಲ್ ಹೊಡೆದರು. ರೂಪಿಂದರ್ ಪಾಲ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್‌ ಅನ್ನು ಗೋಲಿನಲ್ಲಿ ಪರಿವರ್ತಿಸಿದರು. ಭಾರತ ತಂಡವು ಶನಿವಾರ ಇನ್ನೊಂದು ಅಭ್ಯಾಸ ಪಂದ್ಯ ಆಡಲಿದೆ. ಐರ್ಲೆಂಡ್ ತಂಡವನ್ನು ಎದುರಿಸಲಿದೆ. == ಪುರುಷರ ಪಂದ್ಯದ ಜೋಡಿಗಳು == ಒಟ್ಟು 12 ಟೀಮುಗಳು. ಎ ಗುಂಪು:1.ಆಸ್ಟ್ರೇಲಿಯಾ; 2.ಬೆಲ್ಜಿಯಂ; 3.ಬ್ರೆಜಿಲ್ (ಎಚ್); 4.ಗ್ರೇಟ್ ಬ್ರಿಟನ್; 5.ನ್ಯೂಜಿಲ್ಯಾಂಡ್; 6.ಸ್ಪೇನ್. ಬಿ.ಗುಂಪು: == 1/4ಅಂತಿಮ->14 ಆಗಸ್ಟ್ 2016:12:30 ಬೆಲ್ಜಿಯಮ್ ಭಾರತ ೭-೮-೨೦೧೬:ಪಿ.ಆರ್‌. ಶ್ರೀಜೇಶ್ ನಾಯಕತ್ವದ ಭಾರತ ತಂಡ 3–2 ಗೋಲುಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿತು.ಡ್ರ್ಯಾಗ್‌ಫ್ಲಿಕ್ಕರ್‌ ಪರಿಣಿತ ವಿ.ಆರ್. ರಘುನಾಥ್‌ (15ನೇ ನಿಮಿಷ) ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಮೊದಲು ರಘುನಾಥ್‌,ರೂಪಿಂದರ್‌ 27 ಮತ್ತು 49ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸಿದರು. ಆಟ ಮುಗಿಯಲು ಒಂದು ನಿಮಿಷವಷ್ಟೇ ಬಾಕಿಯಿದ್ದಾಗ ಐರ್ಲೆಂಡ್‌ನ ಜೆರ್ಮನ್‌ ಜಾನ್‌ (45ನೇ ನಿಮಿಷ) ಗೋಲು ಗಳಿಸಿ ಅಂತರವನ್ನು 1–2ರಲ್ಲಿ ತಗ್ಗಿಸಿದರು. ಇದೇ ತಂಡದ ಕಾನರ್‌ ಹರ್ಟೆ 56ನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದರು. === ಅಂತಿಮ ಸ್ಥಿತಿ === ನಾಲ್ವರ ಸುತ್ತು:14 ಆಗಸ್ಟ್ 2016::12:30:ಬೆಲ್ಜಿಯಮ್ ||3–1X ಭಾರತ<>ಡೊಕಿಯರ್‍ನಿಂದ ಗೋಲು:34', 45'(ನಿ)ಬೂನ್:ಗೋಲು 50' ಎ.ಸಿಂಘ್ ಗೋಲು 15'(ನೇ ನಿ)ಭಾರತ:ಹೊರಗೆ == ವನಿತೆಯರ ಹಾಕಿ == ಭಾರತದ ಮಹಿಳಾ ಹಾಕಿ ತಂಡ ಮೂವತ್ತಾರು ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ವನಿತೆಯರ ಹಾಕಿ ತಂಡದ ನಾಯಕತ್ವವನ್ನು ಸುಶೀಲಾ ಚಾನು ವಹಿಸಲಿದ್ದಾರೆ.(ಈ ಮೊದಲು ನಾಯಕಿಯಾಗಿದ್ದ ರಿತು ರಾಣಿ ಬದಲಿಗೆ) ಭಾರತ ವನಿತೆಯರ ತಂಡವು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತ್ತು. ನಂತರದ ಕೂಟಗಳಲ್ಲಿ ತಂಡಕ್ಕೆ ಅರ್ಹತೆ ಲಭಿಸಿರಲಿಲ್ಲ. ತಂಡದಲ್ಲಿ == ಪಂದ್ಯಗಳ ಸ್ಪರ್ಧೆಯ ಟೀಮುಗಳು == ಒಟ್ಟು12 ಟೀಮುಗಳು:ಮಹಿಳೆಯರು. ಎ.ಗುಂಪು:1.ಚೀನಾ; 2.ಜರ್ಮನಿ; 3.ನೆದರ್ಲ್ಯಾಂಡ್ಸ್; 4.ನ್ಯೂಜಿಲ್ಯಾಂಡ್; 5.ದಕ್ಷಿಣ ಕೊರಿಯಾ;6.ಸ್ಪೇನ್. ಬಿ.ಗಂಪು ದಿ. 7 ಆಗಸ್ಟ್ 2016:ಜಪಾನ್‌ ವಿರುದ್ಧ ಅಮೋಘ ನಿರ್ವಹಣೆ ನೀಡಿ 2-2 ಗೋಲುಗಳಿಂದ ಡ್ರಾ ಸಾಧಿಸಲು ಯಶಸ್ವಿಯಾಗಿದೆ. ವಿಶ್ವದ 10ನೇ ರ್‍ಯಾಂಕಿನ ಜಪಾನ್‌ 15ನೇ ನಿಮಿಷದಲ್ಲಿ ಎಮಿ ನಿಶಿಕೋರಿ ಮೂಲಕ ಮೊದಲ ಗೋಲು ಹೊಡೆದಿತ್ತು. ಮೀ ನಕಶಿಮಾ 28ನೇ ನಿಮಿಷದಲ್ಲಿ ಇನ್ನೊಂದು ಗೋಲು ಹೊಡೆದರು. 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ರಾಣಿ ರಾಮ್‌ಪಾಲ್‌ ಗೋಲು ಹೊಡೆದು ತೀರುಗೇಟು ನೀಡಿದರು. 40ನೇ ನಿಮಿಷದಲ್ಲಿ ಲಿಲಿಮಾ ಮಿಂಝ್ ಇನ್ನೊಂದು ಗೋಲು ಹೊಡೆದು ಸಮಬಲ ಸಾಧಿಸಿದರು. == ಜಿಮ್ನಾಸ್ಟಿಕ್ಸ್ == "ದೀಪಾ ಕರ್ಮಾಕರ್" ದೀಪಾ ಕರ್ಮಾಕರ್]] (ಈವೆಂಟ್: ಕಲಾತ್ಮಕ):ಭಾರತವು ಮೊದಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಒಂದು ಕಲಾತ್ಮಕ ದೈಹಿಕ ಕಸರತ್ತಿನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದೆ. 1964ರ ನಂತರ ಒಲಂಪಿಕ್ ಸ್ಪಾಟ್ ಮತ್ತು ಸರ್ವಬಗೆಯ ಘಟಕಗಳ ಪ್ರದರ್ಶನಕ್ಕೆ ಆಯ್ಕೆಯಾದ ಮೊದಲ ಭಾರತೀಯ ವನಿತೆ- ದೀಪಾ ಕರ್ಮಾರ್‍ಕರ್. ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ನಾಲ್ಕನೇಸ್ಥಾನ: ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಪ್ರಥಮ ವನಿತೆ ದೀಪಾ ಕರ್ಮಾಕರ್ ಅವರಿಗೆ 14-8-2016 ಭಾನುವಾರ ರಾತ್ರಿ ಸ್ವಲ್ಪದರಲ್ಲಿ ಪದಕ ತಪ್ಪಿತು.ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ಕಠಿಣ ಪೈಪೋಟಿ ಒಡ್ಡಿದ ದೀಪಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮೊದಲ ಅವಕಾಶದಲ್ಲಿ 14,866 ಮತ್ತು ಎರಡನೇ ಅವಕಾಶದಲ್ಲಿ ಕಠಿಣವಾದ ಪ್ರುಡೊನೊವಾ ವಾಲ್ಟ್‌ನಲ್ಲಿ 15.266 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಎರಡನೇ ಸ್ಥಾನಕ್ಕೆ ಬಂದರು. ಒಟ್ಟು 15.066 ಅಂಕಗಳು.ದೀಪಾ ನಂತರ ಕಣಕ್ಕಿಳಿದ ಸ್ವಿಟ್ಜರ್‍ಲೆಂಡ್ ಗುಲಿಯಾ ಸ್ಟೇನ್‌ಗ್ರುಬೆರ್ 15.216 (ಕಂಚು)(ದೀಪಾಗಿಂತ 0.150ಹೆಚ್ಚು) ಅಂಕಗಳನ್ನು ಪಡೆದರು. ಕೊನೆಯ ಸ್ಪರ್ಧಿಯಾಗಿ ಕಣಕ್ಕಿಳಿದ ಅಮೆರಿಕದ ಸಿಮೊನ್ ಬೈಲ್ಸ್ 15.966 ಅಂಕ ಪಡೆದು ಚಿನ್ನ ಗೆದ್ದರು. ಮರಿಯಾಪಸೇಕಾ ರಷ್ಯಾ15253 (ಬೆಳ್ಳಿ) ವಾಲ್ಟ್:[[೧೧]][[೧೨]][[೧೩]] === ಬಾಕ್ಸಿಂಗ್ === ಒಲಿಂಪಿಕ್ ಬಾಕ್ಸಿಂಗ್ ಸ್ಪರ್ಧಿಸಲು ಭಾರತದ ಮೂವರು ಕುಸ್ತಿಪಟುಗಳು ಅರ್ಹತೆ ಪಡೆದಿದ್ದಾರೆ. ಭಾರತವು 2016 ಏಷಿಯನ್ ವಿಶ್ವ ಅರ್ಹತಾ ಪಂದ್ಯಾವಳಿಯಚೀನಾದ ಕೀನನ್‍ಲ್ಲಿ(') 1 ನೇ ಒಲಿಂಪಿಕ್‍ ಅರ್ಹತೆಯ ಸ್ಥಾನವನ್ನು ಮತ್ತು ಒಲಿಂಪಿಕ್ ಸ್ಪಾಟ್ 2016 ಏಷ್ಯಾ & ಓಷಿಯಾನಿಯಾ ಕ್ವಾಲಿಫಿಕೇಷನ್ ಪಂದ್ಯಾವಳಿ- ಬಾಕು, ಅಜರ್ಬೈಜಾನ್‍ನಲ್ಲಿ ಸ್ಪರ್ಧಿಸಿ 2 ನೇ & 3 ನೇ ಸ್ಥಾನವನ್ನು ಪಡೆದುಕೊಂಡಿದೆ. ಶಿವ ಥಾಪಾ (56 ಕೆಜಿ ಬಾಂಟಮ್ವೇಟ್ ವರ್ಗದಲ್ಲಿ)(ಈವೆಂಟ್: -115-126 ಪೌಂ./119 ಬಾಂಟಮ್ವೇಟ್) 0–3 ರೆಮಿರೆಜ್ ಕ್ಯೂಬ/ಹೊರಗೆ ಮನೋಜ್ ಕುಮಾರ್ (64 ಕೆಜಿ) ಪೆಟ್ರಾಸ್ಕಾಸ್ () : 2–1: ()ವಾಟ್ (2) () 0-3-ಹೊರಗೆ ವಿಕಾಸ್ ಕೃಷ್ಣನ್ (75kgs) ಕೊನ್‍ವೆಲ್ ()>೧/೩೨W 3–0//ಸಿಪಲ್ ()೧/೧೬// 3–0 () === ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್) === ಸಂದೀಪ್ ತೋಮರ್ (ಈವೆಂಟ್: 57 ಕೆಜಿ), () ಯೋಗೇಶ್ವರ್ ದತ್ (65 ಕೆಜಿ) () ನರಸಿಂಗ್ ಪಂಚಮ್ ಯಾದವ್ (74 ಕೆಜಿ)(ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಅವರಿಗೆ ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಇದರಿಂದಾಗಿ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.) === ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್) ಮಹಿಳೆಯರು === 17 ಆಗಸ್ಟ್,2016:-ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ ಮಲಿಕ್‌ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು. ವಿನೇಶ್ ಪೋಗಟ್ ()ರೊಮೇನಿಯ 4–0 (ಗೆಲವು):: ()ಚೀನಾ 0–5 (ಸೋಲು) ಬಬಿತಾ ಪೋಗಟ್ ()ಗ್ರೀಸ್ 1–3 (ಸೋಲು) ಹಣಾಹಣಿ ಮುಗಿಯಲು ಇನ್ನು 9 ಸೆಕೆಂಡ್‌ಗಳಿವೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಸ್‌ ಗಳಿಸಿ ಗೆಲುವುಪಡೆದರು.ಸಾಕ್ಷಿಯ ಕೋಚ್‌ ತಮ್ಮ ಶಿಷ್ಯೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಖಾಡದಲ್ಲಿ ಕುಣಿದಾಡಿದರು. ಕುಸ್ತಿಯಲ್ಲಿ:ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತಕ್ಕೆ ಬಂದ ಐದನೇ ಪದಕವಿದು. ಹಿಂದೆ ಕೆ.ಡಿ. ಜಾಧವ್‌ (1952), ಸುಶೀಲ್‌ ಕುಮಾರ್‌ (2008 ಮತ್ತು 2012), ಯೋಗೇಶ್ವರ ದತ್‌ (2012) ಪದಕಗಳನ್ನು ಜಯಿಸಿದ್ದರು. ಫೋಟೋ:[[://..//20160821111212/://..///2016/08/18/431776. 2016-08-21 ವೇಬ್ಯಾಕ್ ಮೆಷಿನ್ ನಲ್ಲಿ.]] ಸ್ವಾಗತ:[[೧೪]] === ರೆಸ್ಲಿಂಗ್ (ಗ್ರೀಕ್ ಮತ್ತು ರೋಮನ್) === ಹರದೀಪ್ ಸಿಂಗ್ (86 ಕೆಜಿ) === ಶೂಟಿಂಗ್ === 1.ಅಭಿನವ್ ಬಿಂದ್ರಾ (ಈವೆಂಟ್: 10 ಮಿ ಏರ್ ರೈಫಲ್); 2.ಪ್ಕಿನಾನ್ ಚೆನಾಯ್ (ಟ್ರ್ಯಾಪ್); 3.ಮಾಯಿರಾಜ್ ಅಹ್ಮದ್ ಖಾನ್ (ಬಂದೂಕಿನಿಂದ ಕೃತಕ ಹಕ್ಕಿ ಹೊಡೆತ); 4.ಪ್ರಕಾಶ್ ನಂಜಪ್ಪ (50 ಮಿ. ಪಿಸ್ತೂಲ್); 5.ಗಗನ್ ನಾರಂಗ್ (10 ಮೀ ಏರ್ ರೈಫಲ್ ಬೋರಲು 50 ಮೀಟರ್ ರೈಫಲ್, 50 ಮೀಟರ್ ರೈಫಲ್ 3 ಸ್ಥಾನಗಳು); 6.ಜಿತು ರೈ ( 10 ಮಿ ಏರ್ ಪಿಸ್ತೂಲ್, 50 ಮಿ ಪಿಸ್ತೂಲ್); 7.ಚೈನ್ ಸಿಂಗ್ (50 ಮಿ ಪೀಡಿತ ರೈಫಲ್, 50 ಮೀಟರ್ ರೈಫಲ್ 3 ಸ್ಥಾನಗಳು); 8.ಗುರುಪ್ರೀತ್ ಸಿಂಗ್ ಮತ್ತು 9.ಮಾನವ್ಜಿತ್ ಸಿಂಗ್ ಸಂಧು (10 ಮಿ ಏರ್ ಪಿಸ್ತೂಲ್, 25 ಮಿ ವೇಗ ಫೈರ್ ಪಿಸ್ತೂಲ್); ಶೂಟಿಂಗ್ ಪುರುಷರು: 10 ಮಿ ಏರ್ ಪಿಸ್ತೂಲ್ವಿ:ಯೆಟ್ನಾಂನ ವಿನ್‌ ವುಆನ್‌ ಹಾಂಗ್‌ ಒಟ್ಟು 202.5 ಪಾಯಿಂಟ್‌ ಗಳಿಸಿ ಚಿನ್ನ;ಬ್ರೆಜಿಲ್‌ನ ಫಿಲಿಪ್‌ ಅಲ್ಮಾಡೆ ಬೆಳ್ಳಿ ಪಡೆದರೆ, ಚೀನಾದ ಪೆಂಗ್‌ ವೇಯಿ ಕಂಚು. === ಶೂಟಿಂಗ್ ವನಿತೆಯರು === 10.ಅಪೂರ್ವಿ ಚಂದೇಲಾ & 11.ಅಯೋನಿಕಾ ಪಾಲ್ (10 ಮೀ ಏರ್ ರೈಫಲ್); 12.ಹೀನಾ ಸಿಧು (10 ಮಿ ಏರ್ ಪಿಸ್ತೂಲ್, 25 ಮಿ ಪಿಸ್ತೂಲ್) ಇದ ರಲ್ಲಿ ಮೊದಲ ಏಳು ಸ್ಥಾನಗಳನ್ನು ಪಡೆದವರಿಗೆ ಫೈನಲ್‌ಗೆ ಅರ್ಹತೆ ಚೀನಾದ ಡು ಲೀ 420.7 ಪಾಯಿಂಟ್ಸ್ ಗಳಿಸಿ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ಇದು ಒಲಿಂಪಿಕ್ಸ್‌ನಲ್ಲಿ ದಾಖಲಾದ ಹೆಚ್ಚು ಪಾಯಿಂಟ್ಸ್‌ ಎನಿಸಿದೆ. 23 ವರ್ಷದ ಆಯೋನಿಕಾ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಜಯಿಸಿ ದ್ದರು. 2014ರಲ್ಲಿ ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. ಅಪೂರ್ವಿ ಗ್ಲಾಸ್ಗೊದಲ್ಲಿ ಚಿನ್ನ ಜಯಿಸಿದ್ದರಲ್ಲದೇ, ಹೋದ ವರ್ಷ ಚೆಂಗ್ವಾನ್‌ನಲ್ಲಿ ಜರುಗಿದ ವಿಶ್ವಕಪ್‌ನಲ್ಲಿ ಕಂಚು, ಮ್ಯೂನಿಚ್‌ ಕೂಟದಲ್ಲಿ ಬೆಳ್ಳಿ ಪಡೆದಿದ್ದರು. == ಬಿಲ್ಲುವಿದ್ಯೆ-ಮಹಿಳೆಯರು & ಪುರುಷರು == ಬಿಲ್ಲುಗಾರಕೆ ವಿವರ:[[೧೫]] 1. ದೀಪಿಕಾ ಕುಮಾರಿ ( ವೈಯಕ್ತಿಕ ಮತ್ತು ತಂಡ/ರಿಕರ್ವ್ ) 2. ಲಕ್ಷ್ಮಿ ರಾಣಿ ಮಾಜಿ (ವೈಯಕ್ತಿಕ ಮತ್ತು ತಂಡ/ರಿಕರ್ವ್) 3. ಬೊಂಬೆಲಾ ದೇವಿ (ವೈಯಕ್ತಿಕ ಮತ್ತು ತಂಡ/ರಿಕರ್ವ್); ೪.ಅತನು ದಾಸ್ -ಪುರುಷರ ಏಕವ್ಯಕ್ತಿ === ಅಥ್ಲೆಟಿಕ್ಸ್ (ಟ್ರ್ಯಾಕ್ ಕ್ರಿಯೆಗಳು) === ತೋನಕಲ್ ಗೋಪಿ (ಈವೆಂಟ್: ಮ್ಯಾರಥಾನ್), ಸಂದೀಪ್ ಕುಮಾರ್ (50 ಕಿ.ಮೀ. ವಾಕ್), ಖೇತಾರಾಮ್, (ಮ್ಯಾರಥಾನ್) ಮನೀಶ್ ಸಿಂಗ್ ರಾವತ್ (50 ಕಿ.ಮೀ. ವಾಕ್), ನಿತೀಂದರ್ ಸಿಂಗ್ ರಾವತ್ (ಮ್ಯಾರಥಾನ್), À್ಬಲೀಂದರ್ ಸಿಂಗ್ ಗುರ್ಮೀತ್ ಸಿಂಗ್ ಮತ್ತು ಇರ್ಫಾನ್ ಕುಲೋತ್ತುಮ್ ತೋಡಿ (20 ಕಿಮೀ ನಡೆಯಲು), ಟಿಂಟು ಲುಕಾ (800 ಮೀ) ಲಲಿತಾ ಬಾಬರ್ (3000m ತಡೆಗಾಲೋಟ), ಕುಶ್ಬೀರ್ ಕೌರ್ (20 ಕಿಮೀ ವಾಕ್), ಸಪ್ನಾ ಪುನಿಯ, (20 ಕಿಮೀ ವಾಕ್), ಕವಿತಾ ರಾವುತ್, ಸುಧಾ ಸಿಂಗ್ ಒ.ಪಿ.ಜೈಷಾ & ಲಲಿತಾ ಬಾಬರ್ (ಮ್ಯಾರಥಾನ್) == ಅತ್ಲೆಟಿಕ್ಸ್ ಮಹಿಳೆಯರು (ಟ್ರ್ಯಾಕ್ == == ಅತ್ಲೆಟಿಕ್ಸ್ ಮಹಿಳೆಯರು (ಟ್ರ್ಯಾಕ್ 4 × 400ಮೀ.ರಿಲೇ == === ಟ್ರ್ಯಾಕ್ -ದೀರ್ಘ === == ಅಥ್ಲೆಟಿಕ್ಸ್ (ಫೀಲ್ಡ್ ಘಟನೆಗಳು) == ವಿಕಾಸ್ ಗೌಡ (ಈವೆಂಟ್: ಡಿಸ್ಕಸ್ ಥ್ರೋ), ಇಂದರ್ ಜಿತ್ ಸಿಂಗ್ ಮತ್ತು ಮನ್ಪ್ರೀತ್ ಕೌರ್ (ಶಾಟ್ ಪುಟ್) === ರೋಯಿಂಗ್ === ದತ್ತು ಬಬನ್‍ ಭೋಕನಾಲ್ (ಈವೆಂಟ್:ಒಂಟಿ ದೋಣಿಹುಟ್ಟು- ) == ಬ್ಯಾಡ್‍ಮಿಂಟನ್ == ಪುರುಷರು: == ಬ್ಯಾಡ್‍ಮಿಂಟನ್ == ಮಹಿಳೆಯರು: == ಬ್ಯಾಡ್ಮಿಂಟನ್ == ಮಹಿಳೆ: ಸಿಂಗಲ್ಸ್: ಪಿ.ವಿ.ಸಿಂಧು: ಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಗೆದ್ದ ಭಾರತದ ಪಿ.ವಿ. ಸಿಂಧು ಬೆಳ್ಳಿ ಪದಕ; ಗಳಿಸಿದ ಸ್ಪೇನ್‌ ಆಟಗಾರ್ತಿ ಕ್ಯಾರೊಲಿನಾ ಮರಿನ್‍ ಚಿನ್ನದ ಪದಕ, ಮತ್ತು ಜಪಾನಿನ ನೊಜೊಮಿ ಒಕುಹರಾ ಕಂಚಿನ ಪದಕ ಪಡೆದರು. ಮುಖ್ಯಾಂಶಗಳು ಒಲಿಂಪಿಕ್ಸ್‌ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಎರಡನೇ ಪದಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚು ಗೆದ್ದಿದ್ದ ಸಿಂಧು ಪಿ.ವಿ. ಸಿಂಧು ಅವರಿಗೆ ₹ 50 ಲಕ್ಷ ನಗದು ಪುರಸ್ಕಾರ ನೀಡುವುದಾಗಿ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರು ಒಂದು ಕೋಟಿ ನೀಡುವುದಾಗಿದೆ ಘೋಷಿಸಿದ್ದಾರೆ. ಫೋಟೊ:[[://..//20160820194804/://..///2016/08/20/432323. 2016-08-20 ವೇಬ್ಯಾಕ್ ಮೆಷಿನ್ ನಲ್ಲಿ.]] == ಟೇಬಲ್ ಟೆನ್ನಿಸ್ == ಶರತ್ ಕಮಲ್ ಅಚಂತ -> (ಈವೆಂಟ್: ಪುರುಷರ ಸಿಂಗಲ್ಸ್), ಕ್ರಿಸನ್Crişan () 1–4(ಸೋಲು) ಸೌಮ್ಯಜಿತ್ ಘೋಷ್ -> ತನ್ವಿರಿಯವೆಚಕುಲ್ () () 1–4(ಸೋಲು) ಮಹಿಳೆಯರ ಸಿಂಗಲ್ಸ್: ಮಾನಿಕಾ ಬಾತ್ರಾ -? ಗ್ರೈಬವೆಸ್ಕ () () 2–4 (ಸೋಲು) ಮೌಮಾ ದಾಸ್ -> ದೊಡೀನ್ () ()ರೊಮೇನಿಯ: 0–4(ಸೋಲು) === ಟೆನ್ನಿಸ್ ಪುರುಷರು-ವನಿತೆಯರು === 06/08/2016ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ (ಅನಿರೀಕ್ಷಿತ) 4–6, 6–7 ರಲ್ಲಿ ಪೋಲೆಂಡ್‌ನ ಮಾರ್ಸಿನ್‌ ಮಟೋವ್‌ಸ್ಕಿ ಮತ್ತು ಲುಕಾಸ್‌ ಕುಬೊಟ್‌ ಕೈಯಲ್ಲಿ ಪರಾಭವಗೊಂಡರು. ಪುರುಷರ ಡಬಲ್ಸ್‌ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಮಹಿಳೆಯರು :ಜೋಡಿ: ಮಿಶ್ರ ಡಬಲ್ಸ್: ಸಾನಿಯಾ ಮಿರ್ಜಾ+ಪ್ರಾರ್ಥನಾ ತೊಂಬ್ರೆ ದಿ6 ಆಗಸ್ಟ್-> ಪೆಂಗ್ ( )+ಜಾಂಗ್ (ಚೈನಾ) 6–7(6–8), 7–5, 5–7 (ಸೋಲು) 13 ; ಮಿಶ್ರ ಡಬಲ್ಸ್:ಸಾನಿಯಾ ಮಿರ್ಜಾ+ಬೊಪಣ್ಣ Xಸ್ಟೊಸುರ್‍ ಪೀಅರ್ಸ್ ()+ಮುರ್ರೇ () 7–5, 6–4(೧/೧೬) :-> 13 ; ಮಿಶ್ರ ಡಬಲ್ಸ್:ಸಾನಿಯಾ ಮಿರ್ಜಾ+ಬೊಪಣ್ಣ Xಸ್ಟೊಸುರ್‍ ವಾಟ್ಸನ್ / 6–4, 6–4 {ನಂತರ-> ವಿ ವಿಲಿಯಮ್ಸ್ ೧/೮ -> ೧/೪->ರಾಮ್ಸ್()} 1/16 ->Xಸ್ಟೊಟರ್ +ಪೀರ್ಸ್ ಆಸ್ಟ್ರೇಲಿಯ : 7–5,6–4(ಗೆಲುವು); 1/8->Xವ್ಯಾಟ್ಸನ್ +ಮರ್ರೇ ಗ್ರೇ.ಬ್ರಿ.: 6–4, 6–4(ಗೆಲುವು); 1/4->Xವೀನಸ್ ವಿಲಿಯಮ್ಸ್ +ರಾಜೀವ್ ರಾಮ್() 6–2, 2–6, [3–10] (ಸೋಲು) ೩ನೇ ಸ್ಥಾನಕ್ಕೆ-> ಹೃದೇಕ್+ ಸ್ಟೆಪನಾಕ್ (ಜೆಕ್)? == ಮಹಿಳೆಯರ ಗಾಲ್ಫ್‌: ಅದಿತಿ ಅಶೋಕ್‌ == ಗಾಲ್ಫ್‌ ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ವಿಭಾಗದ ಫೈನಲ್‌ನ ಮೂರನೇ ಸುತ್ತಿನಲ್ಲಿ ಭಾರತದ ಗಾಲ್ಫ್ ಆಟಗಾರ್ತಿ, ಬೆಂಗಳೂರು ಮೂಲದ ಅದಿತಿ ಅಶೋಕ್‌ ಟಿ 56 ಸ್ಥಾನಕ್ಕೆ ಕುಸಿದಿದ್ದಾರೆ. ಎರಡು ಸುತ್ತುಗಳಲ್ಲಿ ಉತ್ತಮ ಆಟವಾಡಿದ ಅದಿತಿ ಮೂರನೇ ಸುತ್ತಿನಲ್ಲಿ ಗೆಲುವು ಸಮೀಪಿಸಲು ವಿಫಲರಾಗಿದ್ದಾರೆ. 18ರ ಹರೆಯದ ಅದಿತಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ. == ರಿಯೊ ಒಲಿಂಪಿಕ್ಸ್‌-ಪದಕ ನಿರೀಕ್ಷೆ == ಲಂಡನ್‌ ಒಲಿಂ ಪಿಕ್ಸ್‌ನಲ್ಲಿ ಭಾರತ ತಂಡವು ಆರು ಪದಕ ಗಳನ್ನು ಗೆದ್ದಿತ್ತು. ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 12 ಪದಕ ನಿರೀಕ್ಷಯಿದೆ, ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಏಳು ಬ್ಯಾಡ್ಮಿಂಟನ್ ಆಟಗಾರರು ರಿಯೊ ಒಲಿಂಪಿಕ್ಸ್‌ ಅರ್ಹೆ ಪಡೆದಿದ್ದಾರೆ: ಬ್ಯಾಡ್ಮಿಂಟನ್ ೧.ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದಿರುವ ಸೈನಾ ನೆಹ್ವಾಲ್; ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ. ವಿ. ಸಿಂಧು; ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾಗುಟ್ಟಾ–ಅಶ್ವಿನಿ ಪೊನ್ನಪ್ಪ; ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್; ಚಾಂಪಿಯನ್ಸ್ ಟ್ರೋಫಿ ಹಾಕಿ ೨೦೧೬ ಲಂಡನ್ ನೆಡೆಯುತ್ತಿರವ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ ತಂಡದ ವಿರುದ್ಧ 2- 4 ಅಂತರದಲ್ಲಿ ಸೋಲು ಅನುಭವಿಸಿದ್ದರೂ, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ 36 ವರ್ಷಗಳ ಬಳಿಕ ಫೈನಲ್‍ಗೇರುವ ಅವಕಾಶ ಗಿಟ್ಟಿಸಿಕೊಂಡಿದೆ. 5 ಅಂಕಗಳನ್ನು ಗಳಿಸಿದ್ದ ಬ್ರಿಟನ್ಗ್ರೇಟ್ ಬ್ರಿಟನ್, ಬೆಲ್ಜಿಯಂ ವಿರುದ್ಧ 3 -3 ಡ್ರಾ ಸಾಧಿಸಿದ್ದರಿಂದ ಭಾರತಕ್ಕೆ ಫೈನಲ್ ಪ್ರವೇಶಿಸುವ ಅರ್ಹತೆ ಒಲಿದುಬಂತು. 7 ಅಂಕಗಳನ್ನು ಗಳಿಸಿರುವ ಭಾರತ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ: ರಿಯೊ ಒಲಿಂಪಿಕ್ಸ್‌ನ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಮಾಡಲಿದೆ. ಪ್ರತಿಯೊಂದು ಕ್ರೀಡೆಯ ವೀಕ್ಷಕ ವಿವರಣೆಗೆ ಆಯಾ ವಿಭಾಗದ ಪರಿಣಿತರನ್ನು ನೇಮಕ ಮಾಡಿದೆ. ಮಾಜಿ ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಒಲಿಂಪಿಯನ್ ಶೂಟರ್ ಅಂಜಲಿ ಭಾಗ್ವತ್, ಮಾಜಿ ಹಾಕಿ ಪಟು ವಿರೇನ್ ರಸ್ಕೀನಾ, ಈಜುಪಟು ಇಯಾನ್ ಥೋರ್ಪ್ ಅವರು ವೀಕ್ಷಕ ವಿವರಣೆ ನೀಡಲಿದ್ದಾರೆ. ==== ಹತ್ತು ಲಕ್ಷ ರೂಪಾಯಿ ಬಹುಮಾನ ==== ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ವನಿತೆಯರ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ರೇಣುಕಾ ಯಾದವ್ ಅವರಿಗೆ ಛತ್ತೀಸಗಡ ರಾಜ್ಯ ಸರ್ಕಾರವು ಹತ್ತು ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ರಾಜನಂದಗಾಂವ್‌ನ ರೇಣುಕಾ ಅವರು ಒಲಿಂಪಿಕ್ಸ್‌ ತಂಡಕ್ಕೆ ಆಯ್ಕೆಯಾದ ಛತ್ತೀಸಗಢದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಿಯೊ ಪ್ರಾಯೋಜಕತ್ವ: ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ರಿಲಯನ್ಸ್ ಜಿಯೊ ಡಿಜಿಟಲ್ ಸರ್ವಿಸಸ್ ಸಂಸ್ಥೆಯು ಪ್ರಾಯೋಜಕತ್ವ ನೀಡುತ್ತಿದೆ. == ಕರ್ನಾಟಕದ ಕ್ರೀಡಾಪಟುಗಳಿಗೆ ಕೊಡಿಗೆ == ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ ಸೇರಿದಂತೆ ಮೊದಲಾದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವ 41 ಕ್ರೀಡಾಪಟುಗಳಿಗೆ ಒಟ್ಟು ರೂ.1.48 ಕೋಟಿ ಬಹುಮಾನ. ಹೆಚ್ಚು ಮೊತ್ತ ಪಡೆದಿದ್ದು ಟೆನಿಸ್‌ ಆಟ ಗಾರ ಬಿ.ಆರ್‌. ನಿಕ್ಷೇಪ್‌ (ರೂ.8 ಲಕ್ಷ) ಕರ್ನಾಟಕದ ಕ್ರೀಡಾ ಪಟುಗಳು: == ಹರಿಯಾನ ಸಾಕ್ಷಿ ಮಲ್ಲಿಕ್ == == ಕ್ರೀಡಾಪಟುಗಳು == ದೀಪಿಕಾ ಕುಮಾರಿ: ಬೊಂಬೆಲಾ ದೇವಿ ಲೈಶ್ರಾಮ್: ಲಕ್ಷ್ಮಿರಾಣಿ ಮಾಜ್ಹಿ: ಅಟನು ದಾಸ್: ತೊನ್ನಕ್ಕಲ್ ಗೋಪಿ: ಖೇತ್ ರಾಮ್: ಡುಟಿ ಚಂದ್: ಅಶ್ವಿನಿ ಅಕ್ಕುಂಜಿ ನಿತೇಂದ್ರ ಸಿಂಗ್ ರಾವತ್ ವಿಕಾಸ್ ಗೌಡ ಶ್ರೀಕಾಂತ್ ಕಿಡಂಬಿ ಲಲಿತಾ ಬಾಬರ್: ಮನು ಅತ್ರಿ ; ಅಶ್ವಿನಿ ಪೊನ್ನಪ್ಪ ; ದೀಪಾ ಕರ್ಮಾಕರ್; ಸೈನಾ ನೆಹವಾಲ್; ಎಂ.ಆರ್. ಪೂವಮ್ಮ; ಪಿ.ವಿ. ಸಿಂಧು; ಸೈನಾ ನೆಹವಾಲ್; ಜಿತು ರಾಯ್; ಅಯೋನಿಕಾ ಪಾಲ್; ಹೀನಾ ಸಿಧು; ರೋಹನ್ ಬೋಪಣ್ಣ; ಸಾಕ್ಷಿ ಮಲಿಕ್; ಅದಿತಿ ಅಶೋಕ್; ನಿಕ್ಕಿನ್ ತಿಮ್ಮಯ್ಯ;‍ನಿಕ್ಕಿನ್ ತಿಮ್ಮಯ್ಯ; ದತ್ತು ಭೊಕನಾಲ್--(ದೋಣಿ ಚಾಲನೆ); ಮನೀಷ್ ರಾವತ್-(೨೦ಕಿ.ಮೀ.ನಡಿಗೆ);ಕೃಷ್ಣನ್ ಗಣಪತಿ---(೨೦ಕಿ.ಮೀ.ನಡಿಗೆ) ನೋಡಿ:ರಿಯೊ ಒಲಿಂಪಿಕ್ಸ್‌ ಮತ್ತು ಮಾದರಿ ಕಥನ::26 , 2016::ಪೃಥ್ವಿ ದತ್ತ ಚಂದ್ರ ಶೋಭಿ 2016-08-26 ವೇಬ್ಯಾಕ್ ಮೆಷಿನ್ ನಲ್ಲಿ. == ೨೦೧೬ ಖೇಲ್‌ ರತ್ನ ಪ್ರಶಸ್ತಿ ಪ್ರದಾನ == ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದಿ.29 , 2016 ಸೋಮವಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಪದಕ, ಪ್ರಮಾನಪತ್ರ ಹಾಗೂ ರೂ. 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್‌ ರತ್ನ ಪ್ರಶಸ್ತಿಯನ್ನು ಪ್ರಣವ್‌ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು. == ನೋಡಿ == ೨೦೧೬ ರ ಬೇಸಿಗೆ ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತ ೨೦೦೮ ಒಲಂಪಿಕ್ ಕ್ರೀಡಾಕೂಟ ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ ರಿಯೊ ಒಲಿಂಪಿಕ್ಸ್ 2016 ಲಂಡನ್ ಬೇಸಿಗೆ ಒಲಂಪಿಕ್ಸ್ 2012 ಒಲಿಂಪಿಕ್ಸ್‌ನಲ್ಲಿ ಭಾರತ=ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ) 2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ ಫೀಫಾ 17ನೇ ಏಷ್ಯನ್‌ ಕ್ರೀಡಾಕೂಟ 2014 ಭಾರತದ ಮಹಿಳಾ ಹಾಕಿ ತಂಡ ಭಾರತದ ಪುರುಷರ ಹಾಕಿ ತಂಡ ಒಲಂಪಿಕ್ ಕ್ರೀಡಾಕೂಟ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ ಅಥ್ಲೆಟಿಕ್ಸ್ ವಿಶ್ವದಾಖಲೆಗಳು == ವಿಶೇಷ ಓದಿಗೆ == ೨೦೧೬ ರಿಯೋ ಅತ್ಲೆಟಿಕ್ಸ್ ಪರಿಚಯ-ಫೋಟೊ:[[೧೬]] ಒಲಿಂಪಿಕ್ಸ್‌ನಲ್ಲಿ ಓಡಿದ ಮೊದಲ ಕನ್ನಡಿಗ ಪಿ.ಡಿ.ಚೌಗುಲೆ ಹೆಣ್ಣುಮಕ್ಕಳ ‘ಒಲಿಂಪಿಕ್’ ಶಕ್ತಿ ದಾಪುಗಾಲು 2016-08-23 ವೇಬ್ಯಾಕ್ ಮೆಷಿನ್ ನಲ್ಲಿ. ರಿಯೊ ಒಲಿಂಪಿಕ್ಸ್‌ ಮತ್ತು ಮಾದರಿ ಕಥನ::ಪೃಥ್ವಿ ದತ್ತ ಚಂದ್ರ ಶೋಭಿ 2016-08-26 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು == == ಸಂಪರ್ಕ ಕೊಂಡಿಗಳು == * 2012 *//೨೦೧೬:[[೧೭]] *[[೧೮]] *ಒಲಂಪಿಕ್ ಇತಿಹಾಸ:[] [] :[[೧೯]] :[[೨೦]] == ಉಲ್ಲೇಖ ==